Monday, February 27, 2012

"ಅರಣ್ಯ ನಾಶ "

"ನಾಡಿನ ಕಿಚ್ಚು ಕಾಡಿಗೆ ಹಚ್ಚಿ ಆಗಿದೆ ವನದೇವತೆಯ ಮಾರಣ ಹೋಮ 
ಮಾಡಿದ ಪಾಪದ ಶಾಂತಿಗಾಗಿ ಮಾದುತಿಹರಿಲ್ಲಿ ಚೆಂಡಿಯ ಹೋಮ 
ಸಾವಿರ ತಲೆಗಳು ಉರುಳಿದರು ಹುಟ್ಟುವವು ಸಹಸ್ರ ತಲೆಗಳು 
ಒಂದು ವನ್ಯರಾಶಿ ನಸಿಸಿದರೆ ಸೃಷ್ಟಿಸಲು ಸಾದ್ಯವೇ ಮತ್ತೊಂದನ್ನು ..........."

ಶ್ರೀನಿವಾಸ್
ನಾಡಿನ ಕಿಚ್ಚು ಕಾಡಿಗೆ ಹಚ್ಚಿ ನಡೆದಿದೆ ಅಡವಿಯ ಮಾರಣ ಹೋಮ
ಮಾಡಿದ ಪಾಪದ ಶಾಂತಿಗಾಗಿ ನೆದೇಸುತಿಹರಿಲ್ಲಿ ಶಕ್ತಿದೇವತೆಯ

Tuesday, February 14, 2012

ಅಜಾತಶತ್ರುವಿನ ನಿರ್ಗಮನ ಮನಸ್ಸಿಗೆ ಬೇಸರ ತಂದಿದೆ..........

Thursday, February 9, 2012

"ಎನ್ನ ಮನಸ್ಸೇ"



"ನಿನ್ನ ಮೇಲೆ ಎನಗೆ ಕೋಪವು ಇಲ್ಲ

ಅಗೆಂದು ನಿನ್ನ ಮೇಲೆ ದ್ವೇಷವು ಇಲ್ಲ

ಬದಲಿಗೆ ನಿನ್ನ ಕಂಡಾಗಲೆಲ್ಲ

ಎನ್ನಲ್ಲಿ ಬರಿ ಅನುಕಂಪದ ಛಾಯೆಯೇ ಹುಟ್ಟಿದೆಯಲ್ಲ"


"ಬಿಸಿಲ ಬೇಗೆಯಲ್ಲಿ ಅಲೆಯುವೆ ಏಕೆ

ಬಳಲಿ ಬಳಲಿ ಬಸವಳಿಯುವೆ ಇದೇಕೆ

ಸಲ್ಲದ ಚಿಂತನೆಗಳು ಮಾಡುವೆ ನೀನು

ನಿನ್ನನು ನೀನು ತಿಳಿದುಕ್ಕೊಳುವೆಯೇನು"

ಓ ಎನ್ನ ಮನಸ್ಸೇ .............



ಇಂತಿ

"ಶ್ರೀನಿವಾಸ್ "

"ಆಂತರ್ಯ"

"ನೋಡಲೇಬೇಕು ಚೆಂದಮಾಮಾನ ಹಂದವ
ನಾವೆಂದು ಕಂಡ ಇಲ್ಲ ಅವನಲ್ಲಿ ಅವಿತಿರುವ ಮೃಗವ 
ಸಾಗರ ಹಾಲಿನದೇ ಆಗಿದ್ದರು ಆಳ ನೋಡುವುದು ಬೇಡ 
ಚಿನ್ನದ ಸೂಜಿ ಎಂದು ಕಣ್ಣಿಗೆ ಚುಚ್ಚಿಕ್ಕೊಲ್ಲೋನೆ ಮೂಡ...."


ಇಂತಿ 
"ಶ್ರೀನಿವಾಸ್"

Tuesday, February 7, 2012

"ಪ್ರತಿನಿಧಿಗಳು "

"ಏನು ಹೇಳುವುದು ನಮ್ಮ ಜನಪ್ರತಿನಿಧಿಗಳ ಬಗ್ಗೆ 
ಸದನಕ್ಕು ಶಯ್ಯಗೃಹಕ್ಕು ವ್ಯತ್ಯಾಸ ಅರಿಯದವರಿಗೆ
ಜನಗಳ ಹಿತ ಕಾದು ಕಾದು ದಣಿದರೆನೋ ಇವರು 
ವಿಶ್ರಾಂತಿಗಾಗಿ ಈ ಕೆಲಸ ಮಾಡಿದರೋ ????????."


ಇಂತಿ 
"ಶ್ರೀನಿವಾಸ್" 

Sunday, February 5, 2012

"ರಿಕ್ಷಾವಾಲ"

"ಆಗೋದು ಮುರೂ ಕಾಸು 
ನಂಗೆ ಮುರೂ ಕಾಸು 
ರಿಕ್ಷಕ್ಕೆ ಮುರೂ ಕಾಸು 
ಅಪ್ಪಿ ತಪ್ಪಿ ಆದ್ರೆ ಪೋಲಿಸ್ ಕೇಸು 
ಅವರಿಗೂ ಮುರೂ ಕಾಸು
ಮನೇಲಿ ಹೆಂಡತಿ ಕೇಳಿದ್ರೆ ಕಾಸು 
ಇಡ್ಕೊಂಡು ನಾಲ್ಕು ಬಾರ್ಸು "

"ರಿಕ್ಷಾವಾಲ"



"ನಿಷ್ಠೆ "

"ನಿಯತ್ತಿನಲಿ ನಾಯಿಯೇ ಮೇಲು ಮಾನವನಿಗಿಂತ 
ತೋರಿಕೆಯ ಜೀವನದಲಿ ಮಾನವನೇ ಶ್ರೀಮಂತ 
ತುತ್ತು ಅನ್ನಕ್ಕೆ ನಿಷ್ಠೆಯಿಂದ ಇರುವುದು ಜೀವನಪರ್ಯಾಂತ 
ಜೀವನ ಪೂರ್ತಿ ಕೆಡುಕನ್ನೇ ಮಾಡುತ್ತಿದ್ದಾನೆ  ಎಲ್ಲೆಯೇ ಇಲ್ಲ ಇವನಿಗೆ ಭಗವಂತ ....."

ಇಂತಿ 
"ಶ್ರೀನಿವಾಸ್ "


Thursday, February 2, 2012

"ಆತ್ಮಾವಲೋಕನ"

"ಸಿಂಹ ತಾನು ನೆಡೆದು ಬಂದ ದಾರಿಯನ್ನ ಹಿಂತಿರುಗಿ ನೋಡಿದಾಗ ಅದು ಸಿಂಹಾವಲೋಕನ 
ಮನುಷ್ಯ ತಾನು ಎಸಗಿದ ಘನ ಮತ್ತು ಹೀನ ಕಾರ್ಯಗಳ ಬಗ್ಗೆ ಚಿಂತಿಸಿದಾಗ ಅದು ಆತ್ಮಾವಲೋಕನ 
ಇವೆರಡು ಪ್ರತಿ ಜೀವ ಜೆಂತುಗಳ ಬಾಳಿಗೆ ದಾರಿದೀಪವಾಗುತ್ತೆ
ಆಗೇ ಮಾಡೋದ್ರಿಂದ ಪ್ರತಿಯೊಬ್ಬರ ಜೀವನದ ತಾಳೆ ಲಭ್ಯವಾಗುತ್ತೆ ..........."


ಇಂತಿ 
"ಶ್ರೀನಿವಾಸ್"