"ಬೆಳದಿಂಗಳ ಚಂದ್ರನು ಮೂಡಿಬರಲಿ
ಸುಂದರ ತಿಳಿ ನೀಲ ಆಗಸದಲ್ಲಿ
ತುಂತುರಿನ ಮಳೆ ಜಿನುಗುತಿರಲಿ
ನನ್ನಲಿ ನೀ ಮೂಡಿದ ಹೊತ್ತಿನಲ್ಲಿ "
"ಅನುಪಮ ಆ ಒಂದೊಂದು ಕ್ಷಣವೂ
ನೀ ಕಣ್ಮುಂದೆ ಸಾಗಿರಲು
ಮರೆಯುವೆ ನನ್ನನ್ನೇ ನಾನು
ಒಂದೊಂದು ಘಟನೆಯು ಘಟಿಸುತ್ತಿರಲು"
"ನೀ ಮೂಡದ ಒಂದೊಂದು ಇರುಳು
ಕಡುಗತ್ತಲೆಯೇ ಕಣ್ಮುಂದೆ ಕವಿದಂತೆ
ಮೂಡಿದ ಒಂದೊಂದು ಕ್ಷಣವೂ
ಸಿಹಿ ಜೇನ ಸವಿದಂತೆ"
"ಮೂಡುತಲಿರು ಎಂದೆಂದಿಗೂ ನೀ
ಎನ್ನ ಬಾಳಿನ ಒಂದೊಂದು ಇರುಳಿನಲಿ
ನೀ ಮೂಡದ ದಿನ ಸಾಗದು ಈ ಜೀವನ
ಮೂಡಿ ಬಾ ಅನುಕ್ಷಣವು ಸುಂದರ ಸ್ವಪ್ನವೇ ಈ ಬಾಳಿನಲಿ"
ಶ್ರೀನಿವಾಸ್
ಸುಂದರ ತಿಳಿ ನೀಲ ಆಗಸದಲ್ಲಿ
ತುಂತುರಿನ ಮಳೆ ಜಿನುಗುತಿರಲಿ
ನನ್ನಲಿ ನೀ ಮೂಡಿದ ಹೊತ್ತಿನಲ್ಲಿ "
"ಅನುಪಮ ಆ ಒಂದೊಂದು ಕ್ಷಣವೂ
ನೀ ಕಣ್ಮುಂದೆ ಸಾಗಿರಲು
ಮರೆಯುವೆ ನನ್ನನ್ನೇ ನಾನು
ಒಂದೊಂದು ಘಟನೆಯು ಘಟಿಸುತ್ತಿರಲು"
"ನೀ ಮೂಡದ ಒಂದೊಂದು ಇರುಳು
ಕಡುಗತ್ತಲೆಯೇ ಕಣ್ಮುಂದೆ ಕವಿದಂತೆ
ಮೂಡಿದ ಒಂದೊಂದು ಕ್ಷಣವೂ
ಸಿಹಿ ಜೇನ ಸವಿದಂತೆ"
"ಮೂಡುತಲಿರು ಎಂದೆಂದಿಗೂ ನೀ
ಎನ್ನ ಬಾಳಿನ ಒಂದೊಂದು ಇರುಳಿನಲಿ
ನೀ ಮೂಡದ ದಿನ ಸಾಗದು ಈ ಜೀವನ
ಮೂಡಿ ಬಾ ಅನುಕ್ಷಣವು ಸುಂದರ ಸ್ವಪ್ನವೇ ಈ ಬಾಳಿನಲಿ"
ಶ್ರೀನಿವಾಸ್