Monday, February 22, 2016

ಹೊಸತನ

"ಚೆಲುವೆಯೇ ನಿನ್ನ ಮುಗುಳು ನಗೆಯಿಂದ 
ಬೆಳದಿಂಗಳು ಹೊಮ್ಮಲಿ 
ಬೆಳದಿಂಗಳ ಕಂಡ ಹೃದಯದಿ 
ಸ್ಪೂರ್ತಿಯ ಚಿಲುಮೆಯು ಮೂಡಲಿ 

ಹುಣ್ಣಿಮೆಯ ಚೆಲುವೆಲ್ಲವು ಅಡಗಿದೆ 
ನಿನ್ನಯ ಮುದ್ದು ಮೊಗದಲ್ಲಿ 
ಆ ಚೆಲುವೆಲ್ಲವ ತುಂಬಿಕೊಳ್ಳಬಯಸುವೆ 
ನನ್ನಯ ಕಣ್ಣುಗಳಲಿ"

"ಹೊರಹೊಮ್ಮುತ್ತಿವೆ ನುಡಿಗಳು 
ನಿನ್ನ ಕಂಡು ತಂತಾನೇ 
ದಿಟ್ಟಿಸಿ ನೋಡುತ್ತಿವೆ ಒಂದೇ ಸಮನೆ 
ಕಂಗಳು ನಿನ್ನನ್ನೇ 
ವಸಂತ ಋತುವಿನ ಆಗಮನವಾದಂತೆ 
ಈ ಮನಕೆ 
ನಿನ್ನಯ ಆಗಮನವು ತಂತು 
ಹೊಸತನವ ಈ ಹೃದಯಕೆ "

"ಬತ್ತದಿರಲಿ ನೀ ಬಿತ್ತಿದ ಸ್ಪೂರ್ತಿಯು 
ನನ್ನೀ ಹೃದಯದಲಿ 
ಚಿರಾಯುವಾಗಲಿ ಸವಿ ನೆನಪುಗಳು 
ಪ್ರೀತಿ ತುಂಬಿದ ಮನದಲಿ  
ಸೋಲುತ್ತಿದ್ದೆ ಈ ಮನ 
ಪ್ರತಿಕ್ಷಣವು -ಪ್ರತಿದಿನವು  
ಎದುರು ನೋಡುತ್ತಿದೆ 
ನೀ  ಬರುವ  ದಾರಿಯ ಅನುಕ್ಷಣವು"



ಶ್ರೀನಿವಾಸ್ 







Sunday, February 14, 2016

ಬದುಕು

"ಬದುಕೆಂಬ ಕಗ್ಗಂಟ್ಟನ್ನು 
ಹೇಗೆ ಸೃಷ್ಟಿಸಿದ ಭಗವಂತ 
ಸಂಬಂಧಗಳ ಎಣೆದಿಹನು 
ಆ ತುದಿಯಿಂದ ಈ ತುದಿಗೆ"

"ಸಂಬಂಧಗಳ ಎಳೆಯೊಳಗೆ 
ನೂರೆಂಟು ಕವಲುಗಳು 
ಬಿಡಿಸಲು ಕೈಯಿಟ್ಟರೆ 
ಬೆರಳಾಡಿಸಿದಂತೆ ಮೆದುಳೊಳಗೆ"

"ಸಾಗುವುದೇನೋ ಈ ಬದುಕು 
ಬಿಡಿಸಿಲಾಗದ ಒಗಟಿನಂತೆ 
ಬಲು ವಿಚಿತ್ರವು, ವಿಸ್ಮಯವು 
ಈ ಮನುಕುಲದ ಬದುಕು"



ಶ್ರೀನಿವಾಸ್