''ಸುಳ್ಳಿನ ಸರಮಾಲೆ ನೋಡಲು ಬಲು ಸೊಗಸು
ಪ್ರತಿ ಸುಳ್ಳಿಗೆ ಮತ್ತೊಂದು ಸುಳ್ಳು ಎಣೆದೆಣೆದು
ಕಟು ಸತ್ಯವೇ ನಾಚುವಂತೆ ತಯಾರಿಸಿದ
ಸುಳ್ಳಿನ ಸರಮಾಲೆಯು ಬಲು ಸೊಗಸು''
''ಸೂಜಿ ದಾರವೇ ಬೇಡ ಬಲು ಸುಲಲಿತ ಪೋಣಿಸಲು
ಅಂತ್ಯವೇ ಇಲ್ಲ ಒಂದಕ್ಕೊಂದು ಜೊತೆಗೂಡಲು
ಸರಿ ಸಾಟಿಯೇ ಇಲ್ಲ ಜಗದಲಿ ಇದಕೆ
ಮೊದಲೆಂಬುದು ಕೊನೆ ಎಂಬುದಿಲ್ಲ ಈ ಸರಮಾಲೆಗೆ ''
'' ಬಣ್ಣದ ಮಾತಿನ ಮಹನೀಯರು
ಬಲು ಇಷ್ಟದಿ ಧರಿಸುವರು ದಿನ ದಿನವು
ಸುಳ್ಳಲ್ಲಿ ಹುಟ್ಟಿ ಸುಳ್ಳಲ್ಲಿ ಕೊನೆಗಾಣುವ ಪ್ರತಿ ಕ್ಷಣವು
ಅವರ ಪಾಲಿಗೆ ಬಲು ಹಿತವು, ಬಲು ಸೊಗಸು ''
ಶ್ರೀನಿವಾಸ್
ಪ್ರತಿ ಸುಳ್ಳಿಗೆ ಮತ್ತೊಂದು ಸುಳ್ಳು ಎಣೆದೆಣೆದು
ಕಟು ಸತ್ಯವೇ ನಾಚುವಂತೆ ತಯಾರಿಸಿದ
ಸುಳ್ಳಿನ ಸರಮಾಲೆಯು ಬಲು ಸೊಗಸು''
''ಸೂಜಿ ದಾರವೇ ಬೇಡ ಬಲು ಸುಲಲಿತ ಪೋಣಿಸಲು
ಅಂತ್ಯವೇ ಇಲ್ಲ ಒಂದಕ್ಕೊಂದು ಜೊತೆಗೂಡಲು
ಸರಿ ಸಾಟಿಯೇ ಇಲ್ಲ ಜಗದಲಿ ಇದಕೆ
ಮೊದಲೆಂಬುದು ಕೊನೆ ಎಂಬುದಿಲ್ಲ ಈ ಸರಮಾಲೆಗೆ ''
'' ಬಣ್ಣದ ಮಾತಿನ ಮಹನೀಯರು
ಬಲು ಇಷ್ಟದಿ ಧರಿಸುವರು ದಿನ ದಿನವು
ಸುಳ್ಳಲ್ಲಿ ಹುಟ್ಟಿ ಸುಳ್ಳಲ್ಲಿ ಕೊನೆಗಾಣುವ ಪ್ರತಿ ಕ್ಷಣವು
ಅವರ ಪಾಲಿಗೆ ಬಲು ಹಿತವು, ಬಲು ಸೊಗಸು ''
ಶ್ರೀನಿವಾಸ್
No comments:
Post a Comment
Note: Only a member of this blog may post a comment.