"ಚುಕ್ಕಿಯನಿಟ್ಟು ಬಿಡಿಸಿದ ನಿನದೆ ಕಂಗಳಲಿ
ಕಾಣುತಿಹುದು ನನ್ನದೇ ಪ್ರತಿಬಿಂಬ
ಮೂಡಿಬಂದಿಹ ಚೆಲುವ ಮೈಮಾಟವ
ದಾವಾಂತದಲಿ ತುಂಬಿಕೊಂಡಿಹೆ ಕಣ್ಣತುಂಬ"
"ಕಣ್ ಮುಚ್ಚಿ ಕಾದಿಹೆನು ನಿನ ಬಿಂಬವ
ಜಾರಿಹೋಗುವೆ ಕಣ್ತೆರೆದರೆ ನೀನೆಂದು
ಸುಳಿಯದು ಕಾಡಿರುಳು ನಿನ ರೂಪವ
ಕಳೆದುಕೊಳ್ಳಲಾರೆ ನಿನ್ನ ನಾನೆಂದು"
"ಜಾರಿಹೋಗುವೆಯಾದರೆ ನನದೊಂದು ಬಿನ್ನಹ
ಬತ್ತಿಹೋದ ಕಂಗಳಿಂದ ಬಾರದಾಗಿದೆ ಬಿಂಬ
ಅಪರಿಪೂರ್ಣ ಈ ಜೀವನವು ನೀನಿರದ ವಿನಃ
ತುಂಬಿಹೋಗಿದೆ ಈ ಹೃದಯದಲಿ ನಿನದೆ ಬಿಂಬ"
ಶ್ರೀನಿವಾಸ್
ಕಾಣುತಿಹುದು ನನ್ನದೇ ಪ್ರತಿಬಿಂಬ
ಮೂಡಿಬಂದಿಹ ಚೆಲುವ ಮೈಮಾಟವ
ದಾವಾಂತದಲಿ ತುಂಬಿಕೊಂಡಿಹೆ ಕಣ್ಣತುಂಬ"
"ಕಣ್ ಮುಚ್ಚಿ ಕಾದಿಹೆನು ನಿನ ಬಿಂಬವ
ಜಾರಿಹೋಗುವೆ ಕಣ್ತೆರೆದರೆ ನೀನೆಂದು
ಸುಳಿಯದು ಕಾಡಿರುಳು ನಿನ ರೂಪವ
ಕಳೆದುಕೊಳ್ಳಲಾರೆ ನಿನ್ನ ನಾನೆಂದು"
"ಜಾರಿಹೋಗುವೆಯಾದರೆ ನನದೊಂದು ಬಿನ್ನಹ
ಬತ್ತಿಹೋದ ಕಂಗಳಿಂದ ಬಾರದಾಗಿದೆ ಬಿಂಬ
ಅಪರಿಪೂರ್ಣ ಈ ಜೀವನವು ನೀನಿರದ ವಿನಃ
ತುಂಬಿಹೋಗಿದೆ ಈ ಹೃದಯದಲಿ ನಿನದೆ ಬಿಂಬ"
ಶ್ರೀನಿವಾಸ್
No comments:
Post a Comment
Note: Only a member of this blog may post a comment.