Wednesday, May 11, 2016

ಚುಕ್ಕಿ ಚಂದ್ರಮ

"ನನ್ನ ಎದೆಯ ಅಂಗಳದಿ 
ಹಾಸಿಗೆಯಾಸಿ ಕುಳಿತಿರುವೆ 
ನೀಲ ಆಗಸದಿ ಮೂಡುವ 
ಚುಕ್ಕಿ ಚಂದ್ರಮನ ಕಾದು"

"ಮೂಡುವ ಚಂದಿರನ 
ಕಂಡು ಮನದಲ್ಲೇನೋ 
ಲಘುಬಗೆಯ ತಳಮಳ 
ಸಾಗದಿರಲಿ ಕಾಲವೆಂದೆಂದು"

"ಹುಟ್ಟಿವೆ, ಹುಟ್ಟುತ್ತಲಿವೆ 
ಎದೆಯೊಳಗೆ ನೂರೆಂಟು 
ಬಗೆಯರಿಯದ ಕನಸುಗಳು 
ಸಾಯುತ್ತಲಿವೆ ತಂತಾನೇ ನೊಂದು, ಬೆಂದು"


ಶ್ರೀನಿವಾಸ್ 


Wednesday, May 4, 2016

ಮಾನವ ಜನ್ಮ

ಭೂಮಿಗೆ ಬಂದಿರುವೆ ನೀನು 
ಒಳಿತ್ತೊಂದನು  ಮಾಡಲು 
ಭೂಮಿಗೆ ಬಂದಿರುವೆ ನೀನು 
ಪ್ರೀತಿಯನು ಹಂಚಲು 
ಭೂಮಿಗೆ ಬಂದಿರುವೆ ನೀನು 
ಸ್ನೇಹ-ಪ್ರೇಮವ  ಬಿತ್ತಲು 
ಭೂಮಿಗೆ ಬಂದಿರುವೆ ನೀನು 
ಕರುಣೆ, ಮಮತೆಯ ಬೆಳೆಯಲು 
ಸನ್ನಿವೇಶಕೆ ಎದುರಿ 
ಮರುಗಿ ಕುಗ್ಗದಿರು ನೀನು 
ಬರಬಹುದು ಮುಂದೊಮ್ಮೆ 
ಚೆಲುವಿನ ದೀಪಾವಳಿ 
ಮಾನವ ಜನ್ಮ ಬಲು ದೊಡ್ಡದು ......... 


ಶ್ರೀನಿವಾಸ್ 

Wednesday, April 6, 2016

ಯುಗಾದಿ

"ಹೊಸ ಚಿಗುರು 
ಹೊಸ ತಳಿರು 
ತಂದಿದೆ ಯುಗಾದಿ" 

"ಹೊಸ ಹರುಷವ 

ಹೊಸ ನಿಮಿಷವ 
ತಂದಿದೆ ಯುಗಾದಿ" 

"ಹೊಸ ತನವ 

ಹೊಸ ಮನವ 
ತರುವುದೆ ಯುಗಾದಿ?"



ಶ್ರೀನಿವಾಸ್ 


Monday, March 28, 2016

ಸಂಗಾತಿ

"ಸಂಗಾತಿಯ ನಿನ್ನ ಸನಿಹಕೆ 
ಆತೋರೆವ ಪ್ರೇಮಿಯು ನಾನು 
ನನ್ನ ಕಂಗಳಲಿ ತುಂಬಿಕೊಂಡಿಹೆನು 
ಕಣ್ಜಾರಿ ಹೋಗದಿರು ನೀನು"

"ನಕ್ಷತ್ರ ಪುಂಜಗಳ ಎಣಿಸುತ್ತಿರುವೆ 
ನೀ ಬರುವ ದಾರಿಯ ಕಾಯುತಾ 
ನೀ ಬಂದರೊಮ್ಮೆ ಸಾಕು 
ನಿನ್ನ ಬಿಟ್ಟು ಕದಲದೆನ್ನ ಚಿತ್ತ"

"ಕನವರಿಸುವ ಕನಸಾಗಿಹೆ 
ನೀ ನನ್ನ ಬಾಳಿನಲಿ 
ಬಂಧಿಯಾಗಲು ಬಯಸಿರುವೆ 
ನಾ ನಿನ್ನಯ ಸುಂದರ ತೋಳಿನಲಿ"



ಶ್ರೀನಿವಾಸ್ 



Monday, February 22, 2016

ಹೊಸತನ

"ಚೆಲುವೆಯೇ ನಿನ್ನ ಮುಗುಳು ನಗೆಯಿಂದ 
ಬೆಳದಿಂಗಳು ಹೊಮ್ಮಲಿ 
ಬೆಳದಿಂಗಳ ಕಂಡ ಹೃದಯದಿ 
ಸ್ಪೂರ್ತಿಯ ಚಿಲುಮೆಯು ಮೂಡಲಿ 

ಹುಣ್ಣಿಮೆಯ ಚೆಲುವೆಲ್ಲವು ಅಡಗಿದೆ 
ನಿನ್ನಯ ಮುದ್ದು ಮೊಗದಲ್ಲಿ 
ಆ ಚೆಲುವೆಲ್ಲವ ತುಂಬಿಕೊಳ್ಳಬಯಸುವೆ 
ನನ್ನಯ ಕಣ್ಣುಗಳಲಿ"

"ಹೊರಹೊಮ್ಮುತ್ತಿವೆ ನುಡಿಗಳು 
ನಿನ್ನ ಕಂಡು ತಂತಾನೇ 
ದಿಟ್ಟಿಸಿ ನೋಡುತ್ತಿವೆ ಒಂದೇ ಸಮನೆ 
ಕಂಗಳು ನಿನ್ನನ್ನೇ 
ವಸಂತ ಋತುವಿನ ಆಗಮನವಾದಂತೆ 
ಈ ಮನಕೆ 
ನಿನ್ನಯ ಆಗಮನವು ತಂತು 
ಹೊಸತನವ ಈ ಹೃದಯಕೆ "

"ಬತ್ತದಿರಲಿ ನೀ ಬಿತ್ತಿದ ಸ್ಪೂರ್ತಿಯು 
ನನ್ನೀ ಹೃದಯದಲಿ 
ಚಿರಾಯುವಾಗಲಿ ಸವಿ ನೆನಪುಗಳು 
ಪ್ರೀತಿ ತುಂಬಿದ ಮನದಲಿ  
ಸೋಲುತ್ತಿದ್ದೆ ಈ ಮನ 
ಪ್ರತಿಕ್ಷಣವು -ಪ್ರತಿದಿನವು  
ಎದುರು ನೋಡುತ್ತಿದೆ 
ನೀ  ಬರುವ  ದಾರಿಯ ಅನುಕ್ಷಣವು"



ಶ್ರೀನಿವಾಸ್ 







Sunday, February 14, 2016

ಬದುಕು

"ಬದುಕೆಂಬ ಕಗ್ಗಂಟ್ಟನ್ನು 
ಹೇಗೆ ಸೃಷ್ಟಿಸಿದ ಭಗವಂತ 
ಸಂಬಂಧಗಳ ಎಣೆದಿಹನು 
ಆ ತುದಿಯಿಂದ ಈ ತುದಿಗೆ"

"ಸಂಬಂಧಗಳ ಎಳೆಯೊಳಗೆ 
ನೂರೆಂಟು ಕವಲುಗಳು 
ಬಿಡಿಸಲು ಕೈಯಿಟ್ಟರೆ 
ಬೆರಳಾಡಿಸಿದಂತೆ ಮೆದುಳೊಳಗೆ"

"ಸಾಗುವುದೇನೋ ಈ ಬದುಕು 
ಬಿಡಿಸಿಲಾಗದ ಒಗಟಿನಂತೆ 
ಬಲು ವಿಚಿತ್ರವು, ವಿಸ್ಮಯವು 
ಈ ಮನುಕುಲದ ಬದುಕು"



ಶ್ರೀನಿವಾಸ್ 

Tuesday, January 12, 2016

ಹೊಸತನ

"ಈ ಚುಮು ಚುಮು ಮಂಜಿನ ಚಳಿಯಲಿ 
ಸಣ್ಣನೆಯ ಸಂಗೀತವು ಮೂಡಿದೆ ಎದೆಯೊಳಗೆ 
ಮುದುಡಿಹೋಗಿದ ನನ್ನೆಯ ಮನದಲಿ 
ಸುಂದರ ನಗುವು ಮೂಡಿದೆ ಒಳಗೊಳಗೆ"

"ಮಾಗಿಯ ಚಳಿಗೆ ಸೊರಗಿಹ ಕೋಗಿಲೆ 
ಗಾನವನಾಡಿದೆ ಖುಷಿಯಿಂದ 
ನಿನ್ನಯ ಪ್ರೀತಿಯ ಕಂಡು ಮನಸಲೆ 
 ನಲಿದಿಹೆ ನಾನು ಖುಷಿಯಿಂದ"

"ಏನೋ ಹೊಸತನ ತಂದಿದೆ ಗೆಳೆತನ 
ಮಿಂಚಿನ ಸಂಚಲನವು ನನ್ನಲ್ಲಿ 
ಕರಗದಿರಲಿ ಎಂದೂ ಸ್ನೇಹದ ಸಿರಿತನ 
ದ್ವಿಗುಣವಾಗಲಿ ಎಂದೆಂದೂ ನಮ್ಮಲ್ಲಿ"



ಶ್ರೀನಿವಾಸ್ 


Wednesday, January 6, 2016

ಚೆಲುವೆ

ಗೆಳತಿ, 
"ಮುಂಜಾನೆ ಕೊರೆವ ಚಳಿಯಲಿ 
ಎಲೆಮೇಲಿನ ಮಂಜು ಕರಗುವ ಮುನ್ನ 
ಮರದ ಮೇಲಣ ಹಕ್ಕಿಗಳು 
ಪಿಸುಗುಡುತ್ತಿದ್ದವು ತಮನ್ನೇ ನಾಚಿಸುವ 
ಚೆಲುವೆಯೊಬ್ಬಳಿರುವಳು ಇಳೆಯಲಿ ಎಂದು" 

"ನನ್ನ ಅರಿವಿಗೆ ಬಾರಲಿಲ್ಲ ಅಂದು 
ಆ ಕಗ-ಮಿಗಗಳ ನಾಚಿಸುವ ಚೆಲುವೆಯಾರೆಂದು 
ಹುಡುಕ ಹೊರಟಿತು ನನ್ನೀಮನಸ್ಸು 
ಅರಿವಾಗುತ್ತಿದೆ ನನಗಿಂದು 
ಆ ಚೆಲುವೆಯೇ ನೀನೆಂದು" 

"ನಿನ್ನ ಚೆಲುವನು ನನ್ನೀ ಕಂಗಳಿಂದ 
ಸೆರೆಮಾಡಬೇಕೆಂದು ನಾ ಬಯಸಿರಲಿಲ್ಲ 
ಅದೇನೋ ಒಂದು ತಿಳಿಯುತ್ತಿಲ್ಲವಿಂದು 
ಅದೇಕೋ ನನ್ನ ಕಂಗಳು ತುಂಬಿಕೊಂಡಿವೆ  
ನಿನ್ನದೇ ಸುಂದರ-ಸುಮಧುರ ಚೆಲುವನು ಇಂದು"



ಶ್ರೀನಿವಾಸ್ 


Tuesday, January 5, 2016

ಸ್ನೇಹದ ಬುನಾದಿ

"ನನ್ನೆದೆಯ ಮಲ್ಲಿಗೆ ಮಂಟಪವ ಮಾಡಿ 
ನಿನ್ನ ಬರಮಾಡಲು ನಾ ಕಾದಿರುವೆ 
ನನ್ನ ಆಹ್ವಾನಕೆ ಮನ್ನಣೆಯನು ನೀಡಿ 
ಬರುವೆ ನೀನೆಂದು ನಾ ತಿಳಿದಿರುವೆ"

"ಮೆಲ್ಲನೆ ಇರಿಸು ನಿನ್ನ ಮೃದುವಾದ ಹೆಜ್ಜೆಯ 
ನನ್ನೆದೆಯ, ಮಲ್ಲಿಗೆಯ ಅಂಗಳದ ಮೇಲೆ 
ನೀ ಶುರುಮಾಡಿಹೆ ಎದೆಯಲಿ ಸುಶ್ರಾವ್ಯ ಗೀತೆಯ 
ಅತಿಯಾಗಿದೆ ಅದು ನೀ ಹೃದಯಕೆ ಕಾಲಿಟ್ಟ ಮೇಲೆ"

"ಹರಡಲಿ ಸ್ನೇಹದ ಕಂಪು ಎರಡು ಹೃದಯಗಳ ಬನದಿ
ಚಿಲಿಪಿಲಿಯ ಕಲರವವು ಉಂಟಾಗಿದೆ ನನ್ನೆದೆಯೊಳಗೆ 
ಬತ್ತದಿರಲಿ ಎಂದು ನಮ್ಮ ಮನದಿ ಸ್ನೇಹದ ಜೀವನದಿ  
ಭಧ್ರವಾಗಿರಲಿ ಸ್ನೇಹದ ಬುನಾದಿಯು ನಮ್ಮೆದೆಯೊಳಗೆ"



ಶ್ರೀನಿವಾಸ್ 

Sunday, January 3, 2016

ಹನಿ ಹನಿ

"ಕಚಗುಳಿ ಇಡುತಿವೆ ನಿನ್ನಯ ನುಡಿಗಳು ನನ್ನಯ ಎದೆಯೊಳಗೆ 
ಮನಸೇಕೋ ನಲಿದಿದೆ ಖುಷಿಯಲಿ ತಂತಾನೇ ಒಳಗೊಳಗೆ 
ಸೋತಿದೆ ಮನಸಿದು ನಿನ್ನಯ ಸುಮಧುರ ಸ್ನೇಹಕ್ಕೆ 
ಚಿರಋಣಿ ಈ ಹೃದಯವು ನಿನೆರೆದ ಮಧುರ ಭಾವಕ್ಕೆ"

"ಇರಲಿರಲಿ ಈ ಸ್ನೇಹವು ಅನಂತವಾಗಿ 
ತುಡಿವ ಹೃದಯಗಳಿಗೆ ಆಸರೆಯಾಗಿ  
ಮಿಡಿತಕು ಇರುವುದು ತನ್ನದೇ ಅರ್ಥ 
ಆಗದು ಹೃದಯದ ಭಾವನೆಗಳು ವ್ಯರ್ಥ"

"ಮನಸ್ಸೆಂದು ಹೂವಿನಂತೆ ನಗುತಲಿರಲಿ 
ಹೃದಯಕೆ ಸಂತಸದ ಖನಿ ಹರಿದುಬರಲಿ 
ಹನಿ ಹನಿಯಾಗಿ ಮೂಡಿವೆ ಭಾವನೆಗಳು 
ಮರುಕಳಿಸಲಿ ನಿನ್ನೊಡನೆ ಕಳೆವ ಸಂತಸದ ಕ್ಷಣಗಳು"



ಶ್ರೀನಿವಾಸ್