"ನನ್ನೆದೆಯ ಮಲ್ಲಿಗೆ ಮಂಟಪವ ಮಾಡಿ
ನಿನ್ನ ಬರಮಾಡಲು ನಾ ಕಾದಿರುವೆ
ನನ್ನ ಆಹ್ವಾನಕೆ ಮನ್ನಣೆಯನು ನೀಡಿ
ಬರುವೆ ನೀನೆಂದು ನಾ ತಿಳಿದಿರುವೆ"
"ಮೆಲ್ಲನೆ ಇರಿಸು ನಿನ್ನ ಮೃದುವಾದ ಹೆಜ್ಜೆಯ
ನನ್ನೆದೆಯ, ಮಲ್ಲಿಗೆಯ ಅಂಗಳದ ಮೇಲೆ
ನೀ ಶುರುಮಾಡಿಹೆ ಎದೆಯಲಿ ಸುಶ್ರಾವ್ಯ ಗೀತೆಯ
ಅತಿಯಾಗಿದೆ ಅದು ನೀ ಹೃದಯಕೆ ಕಾಲಿಟ್ಟ ಮೇಲೆ"
"ಹರಡಲಿ ಸ್ನೇಹದ ಕಂಪು ಎರಡು ಹೃದಯಗಳ ಬನದಿ
ಚಿಲಿಪಿಲಿಯ ಕಲರವವು ಉಂಟಾಗಿದೆ ನನ್ನೆದೆಯೊಳಗೆ
ಬತ್ತದಿರಲಿ ಎಂದು ನಮ್ಮ ಮನದಿ ಸ್ನೇಹದ ಜೀವನದಿ
ಭಧ್ರವಾಗಿರಲಿ ಸ್ನೇಹದ ಬುನಾದಿಯು ನಮ್ಮೆದೆಯೊಳಗೆ"
ಶ್ರೀನಿವಾಸ್
ನಿನ್ನ ಬರಮಾಡಲು ನಾ ಕಾದಿರುವೆ
ನನ್ನ ಆಹ್ವಾನಕೆ ಮನ್ನಣೆಯನು ನೀಡಿ
ಬರುವೆ ನೀನೆಂದು ನಾ ತಿಳಿದಿರುವೆ"
"ಮೆಲ್ಲನೆ ಇರಿಸು ನಿನ್ನ ಮೃದುವಾದ ಹೆಜ್ಜೆಯ
ನನ್ನೆದೆಯ, ಮಲ್ಲಿಗೆಯ ಅಂಗಳದ ಮೇಲೆ
ನೀ ಶುರುಮಾಡಿಹೆ ಎದೆಯಲಿ ಸುಶ್ರಾವ್ಯ ಗೀತೆಯ
ಅತಿಯಾಗಿದೆ ಅದು ನೀ ಹೃದಯಕೆ ಕಾಲಿಟ್ಟ ಮೇಲೆ"
"ಹರಡಲಿ ಸ್ನೇಹದ ಕಂಪು ಎರಡು ಹೃದಯಗಳ ಬನದಿ
ಚಿಲಿಪಿಲಿಯ ಕಲರವವು ಉಂಟಾಗಿದೆ ನನ್ನೆದೆಯೊಳಗೆ
ಬತ್ತದಿರಲಿ ಎಂದು ನಮ್ಮ ಮನದಿ ಸ್ನೇಹದ ಜೀವನದಿ
ಭಧ್ರವಾಗಿರಲಿ ಸ್ನೇಹದ ಬುನಾದಿಯು ನಮ್ಮೆದೆಯೊಳಗೆ"
ಶ್ರೀನಿವಾಸ್
No comments:
Post a Comment
Note: Only a member of this blog may post a comment.