Tuesday, January 12, 2016

ಹೊಸತನ

"ಈ ಚುಮು ಚುಮು ಮಂಜಿನ ಚಳಿಯಲಿ 
ಸಣ್ಣನೆಯ ಸಂಗೀತವು ಮೂಡಿದೆ ಎದೆಯೊಳಗೆ 
ಮುದುಡಿಹೋಗಿದ ನನ್ನೆಯ ಮನದಲಿ 
ಸುಂದರ ನಗುವು ಮೂಡಿದೆ ಒಳಗೊಳಗೆ"

"ಮಾಗಿಯ ಚಳಿಗೆ ಸೊರಗಿಹ ಕೋಗಿಲೆ 
ಗಾನವನಾಡಿದೆ ಖುಷಿಯಿಂದ 
ನಿನ್ನಯ ಪ್ರೀತಿಯ ಕಂಡು ಮನಸಲೆ 
 ನಲಿದಿಹೆ ನಾನು ಖುಷಿಯಿಂದ"

"ಏನೋ ಹೊಸತನ ತಂದಿದೆ ಗೆಳೆತನ 
ಮಿಂಚಿನ ಸಂಚಲನವು ನನ್ನಲ್ಲಿ 
ಕರಗದಿರಲಿ ಎಂದೂ ಸ್ನೇಹದ ಸಿರಿತನ 
ದ್ವಿಗುಣವಾಗಲಿ ಎಂದೆಂದೂ ನಮ್ಮಲ್ಲಿ"



ಶ್ರೀನಿವಾಸ್ 


Wednesday, January 6, 2016

ಚೆಲುವೆ

ಗೆಳತಿ, 
"ಮುಂಜಾನೆ ಕೊರೆವ ಚಳಿಯಲಿ 
ಎಲೆಮೇಲಿನ ಮಂಜು ಕರಗುವ ಮುನ್ನ 
ಮರದ ಮೇಲಣ ಹಕ್ಕಿಗಳು 
ಪಿಸುಗುಡುತ್ತಿದ್ದವು ತಮನ್ನೇ ನಾಚಿಸುವ 
ಚೆಲುವೆಯೊಬ್ಬಳಿರುವಳು ಇಳೆಯಲಿ ಎಂದು" 

"ನನ್ನ ಅರಿವಿಗೆ ಬಾರಲಿಲ್ಲ ಅಂದು 
ಆ ಕಗ-ಮಿಗಗಳ ನಾಚಿಸುವ ಚೆಲುವೆಯಾರೆಂದು 
ಹುಡುಕ ಹೊರಟಿತು ನನ್ನೀಮನಸ್ಸು 
ಅರಿವಾಗುತ್ತಿದೆ ನನಗಿಂದು 
ಆ ಚೆಲುವೆಯೇ ನೀನೆಂದು" 

"ನಿನ್ನ ಚೆಲುವನು ನನ್ನೀ ಕಂಗಳಿಂದ 
ಸೆರೆಮಾಡಬೇಕೆಂದು ನಾ ಬಯಸಿರಲಿಲ್ಲ 
ಅದೇನೋ ಒಂದು ತಿಳಿಯುತ್ತಿಲ್ಲವಿಂದು 
ಅದೇಕೋ ನನ್ನ ಕಂಗಳು ತುಂಬಿಕೊಂಡಿವೆ  
ನಿನ್ನದೇ ಸುಂದರ-ಸುಮಧುರ ಚೆಲುವನು ಇಂದು"



ಶ್ರೀನಿವಾಸ್ 


Tuesday, January 5, 2016

ಸ್ನೇಹದ ಬುನಾದಿ

"ನನ್ನೆದೆಯ ಮಲ್ಲಿಗೆ ಮಂಟಪವ ಮಾಡಿ 
ನಿನ್ನ ಬರಮಾಡಲು ನಾ ಕಾದಿರುವೆ 
ನನ್ನ ಆಹ್ವಾನಕೆ ಮನ್ನಣೆಯನು ನೀಡಿ 
ಬರುವೆ ನೀನೆಂದು ನಾ ತಿಳಿದಿರುವೆ"

"ಮೆಲ್ಲನೆ ಇರಿಸು ನಿನ್ನ ಮೃದುವಾದ ಹೆಜ್ಜೆಯ 
ನನ್ನೆದೆಯ, ಮಲ್ಲಿಗೆಯ ಅಂಗಳದ ಮೇಲೆ 
ನೀ ಶುರುಮಾಡಿಹೆ ಎದೆಯಲಿ ಸುಶ್ರಾವ್ಯ ಗೀತೆಯ 
ಅತಿಯಾಗಿದೆ ಅದು ನೀ ಹೃದಯಕೆ ಕಾಲಿಟ್ಟ ಮೇಲೆ"

"ಹರಡಲಿ ಸ್ನೇಹದ ಕಂಪು ಎರಡು ಹೃದಯಗಳ ಬನದಿ
ಚಿಲಿಪಿಲಿಯ ಕಲರವವು ಉಂಟಾಗಿದೆ ನನ್ನೆದೆಯೊಳಗೆ 
ಬತ್ತದಿರಲಿ ಎಂದು ನಮ್ಮ ಮನದಿ ಸ್ನೇಹದ ಜೀವನದಿ  
ಭಧ್ರವಾಗಿರಲಿ ಸ್ನೇಹದ ಬುನಾದಿಯು ನಮ್ಮೆದೆಯೊಳಗೆ"



ಶ್ರೀನಿವಾಸ್ 

Sunday, January 3, 2016

ಹನಿ ಹನಿ

"ಕಚಗುಳಿ ಇಡುತಿವೆ ನಿನ್ನಯ ನುಡಿಗಳು ನನ್ನಯ ಎದೆಯೊಳಗೆ 
ಮನಸೇಕೋ ನಲಿದಿದೆ ಖುಷಿಯಲಿ ತಂತಾನೇ ಒಳಗೊಳಗೆ 
ಸೋತಿದೆ ಮನಸಿದು ನಿನ್ನಯ ಸುಮಧುರ ಸ್ನೇಹಕ್ಕೆ 
ಚಿರಋಣಿ ಈ ಹೃದಯವು ನಿನೆರೆದ ಮಧುರ ಭಾವಕ್ಕೆ"

"ಇರಲಿರಲಿ ಈ ಸ್ನೇಹವು ಅನಂತವಾಗಿ 
ತುಡಿವ ಹೃದಯಗಳಿಗೆ ಆಸರೆಯಾಗಿ  
ಮಿಡಿತಕು ಇರುವುದು ತನ್ನದೇ ಅರ್ಥ 
ಆಗದು ಹೃದಯದ ಭಾವನೆಗಳು ವ್ಯರ್ಥ"

"ಮನಸ್ಸೆಂದು ಹೂವಿನಂತೆ ನಗುತಲಿರಲಿ 
ಹೃದಯಕೆ ಸಂತಸದ ಖನಿ ಹರಿದುಬರಲಿ 
ಹನಿ ಹನಿಯಾಗಿ ಮೂಡಿವೆ ಭಾವನೆಗಳು 
ಮರುಕಳಿಸಲಿ ನಿನ್ನೊಡನೆ ಕಳೆವ ಸಂತಸದ ಕ್ಷಣಗಳು"



ಶ್ರೀನಿವಾಸ್